ಅರಿವು 1	

ಎಂದರೆ ತಿಳಿವು, ಜ್ಞಾನ ಎಂದು ಸಾಮಾನ್ಯವಾದ ಅರ್ಥ. ಮನ ಶ್ಯಾಸ್ತ್ರದ ಪ್ರಕಾರ ಅರಿವು (ಕಾಗ್ನಿಷನ್); ಸಂವೇದನೆ, ಬಾವನೆ, ಅನುಬೂತಿ (ಫೀಲಿಂಗ್); ಮತ್ತು ಸಂಕಲ್ಪ, ಇಚ್ಛಾಶಕ್ತಿ, ಪ್ರೇರಣೆ (ಕೊನೇಷನ್) - ಇವು ಪ್ರಜ್ಞೆಯ (ಕಾನ್ಷಸ್‍ನೆಸ್) ಮೂರು ಅಂತಿಮಕ್ರಿಯೆಗಳು, ಜೀವನದಲ್ಲಿ ಇವನ್ನು ಪ್ರತ್ಯೇಕವಾಗಿ ಕಾಣುವುದು ಕಷ್ಟ. ಎಲ್ಲ ಕಡೆಯೂ ಇವು ಮೂರು ಒಟ್ಟಿಗೇ ಕೆಲಸ ಮಾಡುತ್ತವೆ.  ಒಂದೊಂದು ಕಡೆ ಒಂದೊಂದರ ಪ್ರಭಾವ ಹೆಚ್ಚಿರುವುದರಿಂದ ಅದನ್ನು ಗುರುತಿಸಲು ಸಾಧ್ಯ. ಅನುಭೂತಿ ಮತ್ತು ಇಚ್ಛಾಶಕ್ತಿಗಳಿಲ್ಲದೆ ಉಂಟಾಗುವ ಪ್ರಜ್ಞೆಯನ್ನು ಅರಿವು ಎನ್ನಬಹುದು.

ಎಲ್ಲ ಪ್ರಾಣಿಗಳ ಮೂಲ ಪ್ರವೃತ್ತಿ ಹೊರಗಿನ ಜಗತ್ತನ್ನು ಅರಿಯುವುದು, ಪರಿಸರ ಮತ್ತು ಜೀವಗಳ ನಡುವೆ ಇರುವ ಅನಿವಾರ್ಯ ಸಂಬಂಧದ ಒಂದು ಸಾಧನವಾಗಿ ಅರಿವು ಅಥವಾ ಬೋಧೆ ಜೀವಿಯ ಪ್ರಗತಿ ಪಥದಲ್ಲಿ ಕಾಣಿಸಿಕೊಳ್ಳುತ್ತದೆ. ಅಮೀಬದಂಥ ಏಕಾಣುಜೀವಿಯೂ  ಬಾಹ್ಯ ಜಗತ್ತನ್ನು ಅರಿಯಬಲ್ಲದೆ, ಈ ಅರಿವಿನ ಅಗತ್ಯ ಬರುಬರುತ್ತ ಹೆಚ್ಚಿದಂತೆಲ್ಲ ಅದನ್ನು ಸಮರ್ಪಕವಾಗಿ ಸಿದ್ಧಸಿಕೊಳ್ಳುವ ಸಾಧನಗಳು ಕಾಣಿಸಿಕೊಂಡುವು. ಇಂದ್ರಿಯಗಳು ಈ ಅರಿವಿನ  ಸಾಧನೆಯಲ್ಲಿ ಒಂದು ವಿಧಾನ. ವಿಲಿಯಂ ಜೇಮ್ಸ್ ಹೇಳಿದಂತೆ ಅರಿವಿನದಾರಿಯಲ್ಲಿ ಮೊದಲ ಹೆಜ್ಜೆ ಈ ಇಂದ್ರಿಯಾನುಭವ(ಸೆನ್ಸೇಷನ್). ಆದ್ದರಿಂದ ಇಂದ್ರಿಯಗಳನ್ನು ಜ್ಞಾನದ್ವಾರಗಳು ಎಂದೂ ಕರೆಯುತ್ತಾರೆ. ಇಂದ್ರಿಯಾನುಭವಗಳು ಮೂಲಭೂತವಾದ ಮಾನಸಿಕ ಪ್ರಕಾರಗಳು ಎಂದು ಟಿಚ್ನರ್ ಬಣ್ನಿಸಿದ; ಅರಿವಿನ ರಚನೆ ಇಂದ್ರಿಯಾನುಭವಗಳ ಮೂಲಕ ಆಗುತ್ತದೆ, ಎಂಬುದು ಅವನ ವಾದ, ಮನಸ್ಸಿನ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ಇಂದ್ರಿಯಗಳನ್ನು ಅರ್ಥಮಾಡಿಕೊಳ್ಳಬೇಕೆಂಬುದು ಅವನ ಅಭಿಪ್ರಾಯ, ಅಂತೂ ಇಂದ್ರಿಯಗಳನ್ನು ದಾಟಿದರೆ ಆಂತರಿಕ, ದೈಹಿಕ ರಚನೆಯಲ್ಲಿ ಗ್ರಾಹಕಾಂಗಗಳು (ರಿಸಿಪ್ಟರ್) ಇಂದ್ರಿಯಸಂಭೃತವಾದ ವಿವರಗಳನ್ನು ಸ್ವೀಕರಿಸಿ ಮನಸ್ಸಿನ ಮುಂದಿಟ್ಟು ಜ್ಞಾನಕ್ಕೆ ವಿಷಯವನ್ನಾಗಿ ಮಾಡುತ್ತವೆ.

ಜೀವಂತವಾಗಿರುವ ಪ್ರಾಣಿ ಹೊರಗಣ ಜಗತ್ತಿನಿಂದ ಬರುವ ಪ್ರಚೋದಕ ವಿವರಗಳಿಗೆ ಸಮರ್ಪಕವಾಗಿ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆಯಷ್ಟೇ. ಜೀವಿಯಿಂದ ಜಗತ್ತಿಗೆ ಹರಿಯುವ ಪ್ರವಾಹಗಳಿಗೆ ಪ್ರವೃತ್ತಿಕ್ರಿಯೆ, ಪ್ರತಿಕ್ರಿಯೆ (ರೆಸ್ಪಾನ್ಸ್) ಎಂದರೆ ಜಗತ್ತಿನಿಂದ ಜೀವಿಗೆ ಹರಿಯುವು ಪ್ರವಾಹಗಳಿಗೆ ಅರಿವು , ಬೋಧೆ ಎನ್ನುತ್ತಾರೆ. ಪ್ರತಿಕ್ರಿಯೆ ಸಮರ್ಪಕವಾಗಿ ಇರಬೇಕಾದರೆ ಅರಿವು ಪ್ರೌಢವಾಗಿರಬೇಕು ಹಾಗೆಂದೇ ಪ್ರಾಣಿಗಳು ವಿಕಾಸ ಹೊಂದುವಾಗ ಸನ್ನಿವೇಶ ಜಟಿಲಗೊಂಡು ಪ್ರತಿಕ್ರಿಯೆ ಕ್ಲಿಷ್ಟವಾಗಲು ಅರಿವಿನ ಪ್ರಕಾರಗಳೂ ಪ್ರೌಢವಾಗುತ್ತವೆ, ಅಮೀಬದ ಅರಿವಿಗೂ ಮನುಷ್ಯನ ಅರಿವಿಗೂ ಮೂಲಭೂತವಾದ ಪ್ರಯೋಜನ ಒಂದೇ ಇದ್ದರೂ ಅವುಗಳ ರೀತಿ ರಂಗು  ವಿಭಿನ್ನ. ಮಾನವನಲ್ಲಿ  ಇಂದ್ರಿಯದ್ವಾರಗಳು ಹೆಚ್ಚಾಗಿರುವುದು ಮಾತ್ರವಲ್ಲ ಅವುಗಳ ಸಾಮಥ್ರ್ಯವೂ ಹೆಚ್ಚಾಗಿದೆ. ಮನಸ್ಸಿನ ಕೌಶಲ ಹೆಚ್ಚಿದೆ. ಸಂವೇದನೆಗಳ ಇಂಗಿತವನ್ನು ಪರಿಶ್ಕಾರವಾಗಿ ಅರಿಯುವ ವ್ಯವಧಾನ ಮನುಷ್ಯನ ವೈಶಿಷ್ಟ್ಯ ಎಂದರೆ ಉತ್ಪ್ರೇಕ್ಷೆಯಲ್ಲ, ಈ ಕಾರಣದಿಂದಲೇ ಮನುಷ್ಯ ಪ್ರಕೃತಿಯ ಮೇಲೆ ತನ್ನ ಪ್ರಭುತ್ವವನ್ನು ಸ್ಥಾಪಸಲು ಶಕ್ತನಾಗಿರುವುದು, ಅರಿವಿನ ಮೇರೆಯ ವಿಸ್ತರಣದೊಂದಿಗೆ ಪ್ರಗಲ್ಪತೆಯೂ ಸೇರಿದೆ. 

ಜಗತ್ತಿನ ಪ್ರಚೋದನೆಗಳಿಗೆ ಪ್ರತಿಕ್ರಿಯೆಯನ್ನು ಕೈಗೊಳ್ಳಲು ಮನುಷ್ಯನಿಗೆ ಇಂದ್ರಿಯಸ್ಥಾನಗಳು, ನರಮಂಡಲ ವ್ಯವಸ್ಥೆ, ಕ್ರಿಯಾಸಮರ್ಥವಾದ ಸ್ನಾಯು, ಮಾಂಸಖಂಡ(ಮುಂತಾದುವು ನೆರವು ನೀಡುತ್ತೆ, ಮನುಷ್ಯ ಜಾಗೃತನಾಗಿರುವಾಗೆಲ್ಲ ಬಾಹ್ಯವಸ್ತುಗಳಿಂದ ಅವಿರತವಾದ ಪ್ರಚೋದನೆಗಳಿಗೆ ಈಡಾಗುತ್ತಾನೆ. ಈ ಪ್ರಚೋಚನೆಯೆಂಬುದು ಕ್ರಿಯಾಶಕ್ತಿಯ (ಎನರ್ಜಿ) ಹಲವು ಪ್ರಕಾರಗಳಂತೆ ಇಂದ್ರಿಯಗಳನ್ನು ಮುಟ್ಟು ಸಂವೇದನಗಳನ್ನು  ಉದ್ಬೋಧನೆಗೊಳಿಸುತ್ತದೆ. ಒಂದೊಂದು ಇಂದ್ರಿಯ ಒಂದೊಂದು ಬಗೆಯ ಪ್ರಚೋದನೆಯನ್ನು ಗ್ರಹಣ ಮಾಡಲು  ಸಮರ್ಥವಾಗಿರುತ್ತದೆ. ಕಣ್ಣು  ಬೆಳಕನ್ನು , ಕಿವಿ ಶಬ್ದವನ್ನು , ಚÀರ್ಮ ಸ್ಪರ್ಶವನ್ನು, ಮೂಗು ವಾಸನೆಯನ್ನು ಗ್ರಹಿಸುತ್ತವೆ. ಹೀಗೆ ಇಂದ್ರಿಯಗಳಿಗೆ ನಿಯತವ್ಯಾಪಾರವಿದೆ.  ಇವೆಲ್ಲ ಅರಿವಿನ ಪ್ರಕಾರಗಳೇ, ಸಾಮಾನ್ಯವಾಗಿ ನಾವು ಯಾವುದಾದರೊಂದು ವಸ್ತುವನ್ನು ಗ್ರಹಿಸುವಾಗ ಹಲವಾರು ಇಂದ್ರಿಯಗಳು ಒಟ್ಟಿಗೆ ಕೆಲಸ ಮಾಡುತ್ತವೆ. ಪ್ರತ್ಯಭಿಜ್ಞೆಯಲ್ಲಂತೂ (ರೆಕಾಗ್ನಿಷನ್) ನಾನಾ ಇಂದ್ರಿಯಾರ್ಥಗಳ ಸಮಷ್ಟಿವ್ಯಾಪಾರವಿರುತ್ತದೆ. ಇಂದ್ರಿಯಗಳು ಮಾತ್ರ ಕೆಲಸ ಮಾಡಿದರೆ ಅರಿವು ಮೂಡುವುದಿಲ್ಲ. ಇಂದ್ರಿಯಗಳಿಂದ ಸಿದ್ಧವಾದ ಅನುಭವಗಳಿಗೆ ಅರ್ಥವನ್ನು ಸೇರಿಸಿ ಪ್ರತ್ಯಕ್ಷಾನುಭವ (ಪರ್ಸೆಪ್ಷನ್) ಆದಾಗಲೇ ಅರಿವು ಪೂರ್ಣವಾಗುವುದು; (ನೋಡಿ- ಪ್ರತ್ಯಕ್ಷಾನುಭವ). ಆದರೆ ಈ ಇಂದ್ರಿಯಾನುಭವ ಎಲ್ಲಿ ಯಾವಾಗ, ಬೋಧೆಯ ಸ್ಥಿತಿಯನ್ನು ಮುಟ್ಟುತ್ತದೆ ಎಂಬುದು ಶಾಸ್ತಕ್ಕೂ ಮನಶ್ಯಾಸ್ತ್ರಕ್ಕೂ ಸಮನಾದ ಸಮಸ್ಯೆ. ಇದು ಇನ್ನೂ ಸಮರ್ಪಕವಾಗಿ ಪರಿಹಾರವಾಗಿಲ್ಲ.

ಅರಿವಿನ ಸಮಸ್ಯೆ ತತ್ತ್ವಶಾಸ್ತ್ರದಿಂದಲೇ ಮನಶ್ಯಾಸ್ತ್ರಕ್ಕೆ  ಬಂದ ದತ್ತಿ. ಕಾಗ್ನಿಷನ್ ಎಂಬ ಇಂಗ್ಲಿಷಿನ ಪದ ಗ್ನಾಸಿಸ್ ಎಂಬ ಧಾತುವಿನಿಂದ ಬಂದುದು. ಇದಕ್ಕೆ ಸಂಸ್ಕøತದ ಜ್ಞಾ ಧಾತು ಸಮಾನ; ಜ್ಞಾ ಎಂದರೆ ತಿಳಿಯುವುದು ಎಂದರ್ಥ. ಆದರೆ ಇಂಗ್ಲಿಷಿನ ಕಾಗ್ನಿಷನ್ ಪದದಲ್ಲಿ  ಸಹಕಾರದಿಂದ, ಒಡನೆ ಎಂಬರ್ಥದ ಕೊ ಎಂಬ ಉಪಸರ್ಗಕ್ಕೂ ಪ್ರಾಧಾನ್ಯವಿದೆ. ಒಟ್ಟಾರೆ,  ವಸ್ತುವಿನ ಸಹಕಾರದಿಂದ ತಿಳಿಯುವುದು ಬೋಧೆ; ಯಾವುದಾದರೂ ಒಂದು ವಸ್ತು ಇಂದ್ರಿಯಗೋಚರವಾಗಿ ಎದುರಿಗೆ ಇದ್ದರೇನೆ ಬೋಧೆಯಾಗುವುದು, ಪ್ರತ್ಯಕ್ಷಕಲ್ಪನೆ, ಪ್ರತ್ಯಯ (ಕಾನ್ಸೆಪ್ಟ್), ಸ್ಮøತಿ, ನಿರೀಕ್ಷೆ, ಪ್ರತ್ಯಭಿಜ್ಞೆ ಮುಂತಾದ ಕ್ರಿಯೆಗಳೆಲ್ಲವನ್ನೂ ಬೋಧೆಯಲ್ಲಿ ಸೇರಿಸುತ್ತಾರೆ. ವಸ್ತು ಎದುರಿಗೆ ಇದ್ದು ಅದು ಇಂದ್ರಿಯ ವಿವರಗಳನ್ನು ಹೊಕ್ಕು ಆ ವಸ್ತುವಿನ ಅರಿವುಂಟಾದರೆ ಅದು ಪ್ರತ್ಯಕ್ಷ, ವಸ್ತು ದೂರವಿದ್ದು ಇಂದ್ರಿಯಗಳಿಗೆ ನೇರವಾದ ಸಂಬಂಧ ಇಲ್ಲವಾದರೂ ಅದರ ಅರಿವು ಉಂಟಾದರೆ ಅದು ಕಲ್ಪನೆ. ಪ್ರತ್ಯಕ್ಷದಿಂದ ಉಂಟಾದ ಚಿತ್ತದೊಳಗಿನ ಚಿತ್ರವೇ ಪ್ರತ್ಯಯ. ದೂರದ ವಸ್ತು ಕಾಲದ ದೃಷ್ಞಿಯಿಂದ ಭೂತವಾಗಿದ್ದರೆ ಸ್ಮøತಿ. ಭವಿಷ್ಯತ್ತಾದರೆ ನಿರೀಕ್ಷೆ, ಅಂತೂ ವಸ್ತುವಿನ ಸಾಕ್ಷಾತ್ ಅಥವಾ ಪರೋಕ್ಷ ಸಂಪರ್ಕವಿದ್ದಾಗ ನಮ್ಮ ಚಿತ್ತವೃತ್ತಿಗಳು ಉದ್ಭೂತವಾಗಿ ವಸ್ತುವಿನ ವಿವರಗಳನ್ನು  ಗ್ರಹಿಸುವುದು ನೈಜವಾದ ವ್ಯವಹಾರ, ಪ್ರತ್ಯಕ್ಷ ಅರಿವಿನ ಮುಖ್ಯ ಪ್ರಕಾರವಾದುದರಿಂದ ಹಲವೊಮ್ಮೆ ಅರಿವನ್ನೂ ಪ್ರತ್ಯಕ್ಷಾನುಭವವನ್ನೂ ಸಮಾನಾರ್ಥಕ ಪದಗಳಂತೆ ಉಪಯೋಗಿಸುವ ವಾಡಿಕೆ ಇದೆ.

ಆದರೆ ಆಧುನಿಕ ಮನಶ್ಯಾಸ್ತ್ರದ ಪ್ರಕ್ರಿಯೆಯಲ್ಲಿ ಅರಿವನ್ನು  ಹೆಚ್ಚಾಗಿ ಬಳಸುವ ಪದ್ಧತಿಯಲ್ಲ. 1854 ರಲ್ಲಿ ಜೆ.ಎಫ್.ಫೆರಿಯರ್ ಎಂಬ ತತ್ತ್ವಶಾಸ್ತ್ರ ಪ್ರಮುಖವಿಷವನ್ನಾಗಿ ಗ್ರಹಿಸಿ ಜ್ಞಾನಮೀಮಾಂಸೆ (ಎಪಿಸ್ಟಮಾಲಜಿ) ಎಂಬ ತತ್ತ್ವಶಾಖೆಯನ್ನು ಆರಂಭಿಸಿದ. ವಸ್ತುತಃ ಇದು ಮನಶ್ಯಾಸ್ತ್ರಪರವಾದ ಅಧ್ಯಯನವೇ ಆಗಿದ್ದುದರಿಂದ ಪ್ರಯೋಗಿಕ ವಿಭಾಗವನ್ನಷ್ಟೇ ಮನಶ್ಯಾಸ್ತ್ರದ ಪಾಲಿಗೆ ಬಿಟ್ಟರು. ಬರಬರುತ್ತ ಆತ್ಮ ಅಥವಾ ಚೈತನ್ಯ (ಕಾನ್ಷಸ್‍ನೆಸ್) ಎಂಬ ಕಲ್ಪನೆಗಳು ಸಡಿಲವಾಗಿ ವರ್ತನೆ, ಕ್ರಿಯೆ (ಬಿಹೇವಿಯರ್) ಪ್ರಮುಖವಾದಾಗ ಅರಿವಿನ ಬಳಕೆಯೂ ಹಿಂದೆ ಬಿತು. ಈ ಕಾರಣದಿಂದ ಬಹುಮಟ್ಟಿಗೆ ಅರಿವು ಎಂಬುದನ್ನು ಇಂದ್ರಿಯಾನುಭವ, ಪ್ರತ್ಯಾಕ್ಷಾನುಭವಗಳಲ್ಲಿ ಮುಗಿಸಿಬಿಡುತ್ತಾರೆ.

ಆದರೆ, ಐತಿಹಾಸಿಕ ದೃಷ್ಟಿಯಿಂದ ಇದರಷ್ಟು ಪ್ರಭಾವಶಾಲಿಯಾದ ಕಲ್ಪನೆ ಮತ್ತೊಂದಿಲ್ಲ. ಪ್ರಾಚೀನಕಾಲದಿಂದ ಮನಶ್ಯಾಸ್ತ್ರದ  ಮುಖ್ಯ ವಸ್ತುಗಳಲ್ಲಿ ಒಂದಾದ ಅರಿವು ವಿಲಿಯಂ ಜೇಮ್ಸ್. ವಿಲ್ಹೆಲ್ಮ್ ಉಂಟ್, ಸ್ಟೌಟ್, ಸ್ಟರ್ನ್, ಸ್ಟಿಯರ್‍ಮನ್ ಮುಂತಾದವರ ಸಂಶೋಧನೆಗೆ ಒಳಪಟ್ಟ ವಿಷಯವಾಗಿತ್ತು. ಚಾರಲ್ಸ್ ಸ್ಪಿಯರ್‍ಮನ್ ಈ ವಿಚಾರವಾಗಿ ಅಮೂಲ್ಯವದ ಪ್ರಯೋಗಗಳನ್ನು ನಡೆಸಿ ಮೂರು ನಿಯಮಗಳನ್ನು  ನಿರೂಪಿಸಿದ. ಅನುಭವಗಳನ್ನೂ ಅರಿಯುವೆವು ಎಂಬುದು ಮೊದಲನೆಯದು. ನಾವು ಹೊರಜಗತ್ತನ್ನು ತಿಳಿಯುವುದು ಮಾತ್ರವಲ್ಲ. ಇಂದ್ರಿಯಾನುಭವಗಳನ್ನು ಪಡೆಯುವುದು ಮಾತ್ರವಲ್ಲ. ಈ ತಿಳಿವಳಿಕೆ. ಇಂದ್ರಿಯನುಭವ, ಪ್ರಯತ್ನ, ಉದ್ವೇಗ(ಇವು ನಮ್ಮಲ್ಲಿ ಉಂಟಾಗುವುದನ್ನು ಅರಿಯುವುದೂ ಸಾಧ್ಯ. ಎರಡನೆಯ ನಿಯಮ ಕಲ್ಪನೆಗಳ ನಡುವೆ ಸಂಬಂಧದ ಪ್ರಸಾರಗಳನ್ನು ಸ್ಪಷ್ಟಪಡಿಸುವುದು, ಎಳೆಯುವುದು ಸಹಜವಾದ ಪ್ರವೃತ್ತಿ ಎಂಬುದು ಈ ಮೂರು ನಿಯಮಗಳು ಪ್ರತೀತ್ವಸಂಬೋಧಿ (ನಿಯೋಜಜೆನೆಸಿಸ್) ಎನಿಸಿಕೊಳ್ಳುತ್ತದೆ. ಅರಿವು ಉತ್ಪನ್ನವಾಗಲು ಅವಶ್ಯವಾದ ಉಪಾಧಿಗಳನ್ನು, ಅನುಭವದ ಪ್ರಕಾರಗಳನ್ನು , ಈ ನಿಯಮತ್ರಯ ವಿವರಿಸುತ್ತದೆ.  ಈ ನಿಯಮಗಳನ್ನು ಮಂಡಿಸಿದ ಸ್ಪಿಯರ್‍ಮನ್ ಅವಿಶ್ರಾಂತವಾಗಿ ಪ್ರಯೋಗಗಳನ್ನು ನಡೆಸಿ ಬುದ್ಧಿಶಕ್ತಿ, ಸ್ಮøತಿಶಕ್ತಿ, ಕಲಿಕೆ ಮುಂತಾದ ಮಾನಸಿಕಪ್ರವೃತ್ತಿಗಲಲ್ಲಿ ಅರಿವಿನ ಪಾತ್ರವನ್ನು ವಿಶದೀಕರಿಸಿದ. ಮನಶ್ಯಾಸ್ತ್ರದ ವಿಶ್ವದಲ್ಲಿ ಅರಿವಿಗೆ ಪ್ರಯೋಗಿಸಿದ್ದವಾದ ಸ್ಥಾನವನ್ನು ಒದಗಿಸಿದವ ಸ್ಪಿಯರ್‍ಮನ್.

ಸಮಷ್ಟಿಮನಶ್ಯಾಸ್ತ್ರದ (ಗೆಸ್ಟಾಲ್ಟ್ ಮನಶ್ಯಾಸ್ತ್ರ) ಬೆಳೆವಣಿಗೆ ಅರಿವಿನ ಸ್ಥಾನವನ್ನು ಮತ್ತೆ ಸ್ಥಾಪಿಸಿತು. ಈ ಪಂಥದವರು ಪ್ರತ್ಯಕ್ಷಾನುಬವದ ವಿಚಾರವಾಗಿ ನಡೆಸಿದ ಅಧ್ಯಯನ ಅರಿವಿನ ಪ್ರಕಾರಗಳನ್ನು ಸ್ಫುಟಪಡಿಸಿತು. ಕರ್ಟ್ ಲೆವಿನ್ ಎಂಬ ಪ್ರಖ್ಯಾತ ಮನಶ್ಯಾಸ್ತ್ರಜ್ಞ ನಿರೂಪಿಸಿದ ಚಿತ್ತಕ್ಷೇತ್ರವಾದ ಅರಿವಿನ ನೆಲೆಯನ್ನು ಚಿತ್ತವೃತ್ತಿಗಳ ವ್ಯವಹಾರದ ಹಿನ್ನೆಲೆಯಲ್ಲಿ ನಿರ್ದೇಶಿಸಿತು. ಪ್ರಸಂಗವಾದದ (ಫೆನಾಮಿನಾಲಜಿ) ದೃಷ್ಟಿಯಿಂದ ಮನುಷ್ಯನ ಇಡೀ ವ್ಯಕ್ತಿತ್ವವನ್ನು ವ್ಯವಹಾರಕ್ಷೇತ್ರವೆಂದು ಪರಿಗಣಿಸಿದರೆ ಯಾವೊಂದು ವರ್ತನೆಯೂ ಈ ಕ್ಷೇತ್ರದ ವಿವರಗಳಿಂದ ನಿರ್ದಿಷ್ಟವಾಗುವುದು. ಈ ಕ್ಷೇತ್ರ ಸಂದರ್ಭಶುದ್ದವಾಗಿ ವ್ಯವಸ್ಥೆಗೊಳ್ಳಲು ಅರಿವು ಮುಖ್ಯವಾದ ಸಾಧನ. ಅರಿವು ಕೂಡ ಒಂದು ಕ್ರಿಯೆ ಎನ್ನುವ ವಾದ ಮನಶ್ಯಾಸ್ತ್ರದ ಇತಿಹಾಸದ ಮಧ್ಯಯುಗದಲ್ಲಿ ಪ್ರಚಲಿತವಾಗಿತ್ತು. ಈ ವಾದ ಚಿತ್ತಕ್ಷೇತ್ರವಾದಿಗಳಿಂದ ಮತ್ತೆ ಪ್ರಚಾರಕ್ಕೆ ಬಂತು. ಅರಿವು ಬೇರೆ, ವ್ಯವಸ್ಥೆ ಬೇರೆ, ಅಗತ್ಯವಿದ್ದರೆ ಕ್ಷೇತ್ರದ ಪುನವ್ರ್ಯವಸ್ತೇ ಆಗಬೇಕು; ಇದಕ್ಕೆ ಕೂಡ ಅರಿವು ಪ್ರಮುಖವಾದ ಸಾಧನೆ ಎಂಬ ನಿಲುವು ಸ್ಪಷ್ಟವಾಯಿತು. ಅರಿವಿನ ಪ್ರಕಾರವೇ ವ್ಯವಸ್ಥೆ. ಅರಿವೆಂದರೆ ವ್ಯವಸ್ಥೆಯ ಒಂದು ಮುಖ-ಎಂದು ಸಮಷ್ಟಿವಾದಿಗಳು ನಿರೂಪಿಸಿದ್ದರು. ಲೆವಿನ್ನಂತೆ ಅರಿವಿಗೆ ವ್ಯವಸ್ಥೆಗಿಂತ ಭಿನ್ನವಾದ ಅತಿತ್ವವನ್ನು ಹೇಳಬೇಕಾಗುತ್ತದೆ. ಪ್ರತ್ಯಕ್ಷಾನುಭವ ಎನ್ನುವುದು ಈ ವಾದದವರ ಪ್ರಕಾರ ಬೋಧಯ ಕ್ಷೇತ್ರ ಇದ್ದಕ್ಕಿದ್ದಂತೆ ಪುನವ್ರ್ಯಸ್ಥಿತವಾಗುವುದು.

ಸಂಕೇತಸಮಷ್ಟಿ ನಿರೀಕ್ಷೆಯ (ಸೈನ್ ಗೆಸ್ಟಾಲ್ಟ್ ಎಕ್ಸ್‍ಪೆಕ್ಟೆನ್ಸಿ) ವಾದವನ್ನು ಮಂಡಿಸಿದ ಇ.ಸಿ.ಟೋಲ್‍ಮನ್ ಅರಿವಿನ ಸಮಸ್ಯೆಯನ್ನು ಮತ್ತೊಂದು ದೃಷ್ಟಿಯಿಂದ ಅಧ್ಯಯನ ಮಾಡಿದ, ಜೀವಿ ನಿರ್ದಿಷ್ಟ ಗುರಿ ಮುಟ್ಟಲು ವ್ಯವಸ್ಥಿತವಾದ ಸಾಧನಗಳನ್ನೂ ಸಂಕೇತಗಳನ್ನೂ ಬಳಸಿಕೊಳ್ಳುವಾಗ ಅರಿವು ಉಪಯೋಗಕ್ಕೆ ಬರುತ್ತದೆ. ಇಲ್ಲಿ ಅರಿವು ಎಂದರೆ ಸಾಧನ-ಸಾಧ್ಯಗಳ ಮದ್ಯೆ ಇರುವ ಸಂಬಂಧ; ವಸ್ತುವನ್ನು ಪ್ರತ್ಯಕ್ಷದಿಂದ ಗ್ರಹಿಸುವುದು, ಅರಿಯುವುದು, ಅಂದರೆ ಅದರ ಆಕಾರ, ಸ್ವಭಾವ, ಮೌಲ್ಯ, ಪ್ರಯೋಜನ, ಇಂಗಿತಗಳನ್ನು ಗ್ರಹಿಸುವುದು, ಸ್ಮøತಿಯಲ್ಲಿ ಧರಿಸಿಕೊಳ್ಳುವುದು, ಈ ಮೂರು ಅರಿವಿನ ಅಂಗಗಳು, ಹೀಗೆ ಯವುದಾದರೊಂದು ಪ್ರಾಣಿ ಹೊರಗಿನ ವಸ್ತುವನ್ನು ನೋಡುವಾಗ ಆ ವಸ್ತುವಿನ ಸಂಕೇತವನ್ನೂ ಇಂಗಿತವನ್ನೂ ಗ್ರಹಿಸಿ ವಸ್ತುಗಳಿಗೂ ತನಗೂ ಇರುವ ಸಂಬಂಧವನ್ನೂ ನಿರೀಕ್ಷೆಯಿಂದ ಕ್ರಿಯೋನ್ಮುಖವಾಗಿ ಮಾಡುವುದರಿಂದ ಇದಕ್ಕೆ ಸಂಕೇತಸಮಷ್ಟಿವಾದ ಎಂಬ ಹೆಸರು ಬಂದಿದೆ. ಈ ಸಂಧರ್ಭದಲ್ಲಿ ಟೋಲ್ಮನ್ ಮೂರುಬಗೆಯ ಅರಿವನ್ನು ಹೇಳುತ್ತಾನೆ. 1 ಮೂಲಭೂತವಾದ ಗುರಿಗಳಿಗೆ ಸಂಬಂಧಪಟ್ಟಂತೆ ತೃಪ್ತಿಪಡೆದುಕೊಳ್ಳಲು ಸಿದ್ಧವಾದ ಅರಿವು ಕ್ಯಾಥೆಕ್ಸಿಸ್, 2 ಮೂಲಭೂತವಾದ ಗುರಿಗಳಿಗೂ ಸನ್ನಿವೇಶದ ವಸ್ತುಗಳಿಗೂ ಸಂಬಂಧವನ್ನು ಕಲ್ಪಿಸಿ ಉಪಗುರಿಗಳನ್ನು ಏರ್ಪಡಿಸುವ ಅರಿವು ಈಕ್ವಿವೆಲೆಂಟ್ ಬಿಲೀಫ್ಸ್. 3 ಹೊರಗಿನ ಸನ್ನಿವೇಶದ ಪ್ರಸಂಗಗಳಲ್ಲಿ ಅನುಕ್ರಮವನ್ನು ಉಂಟಮಾಡಿ ಅದರ ಮೂಲಕ ಮುಂದೆ ಬರಬಹುದಾದ ಫಲರೂಪಿ ವಸ್ತುಗಳನ್ನು ನಿರೀಕ್ಷಿಸುವ ಅರಿವು ಫೀಲ್ಡ್ ಎಕ್ಸ್‍ಪೆಕ್ಟೆನ್ಸೀಸ್, ಈ ವಿಭಾಗದ ಇಂಗಿತವಾಗಿ ಟೋಲ್ಮನ್ ವಾದಿಗಳು ಅರಿವಿನ ಭೂಪಟಗಳನ್ನು ಸಿದ್ಧಪಡಿಸಿದ್ದಾರೆ.
ಮೂಲಭೂತ ಪ್ರವೃತ್ತಿಗಳಿಗೂ ಮೋಟಿವೇಷನ್ ಅರಿವಿಗೂ ಇರು ಸಂಬಂಧವನ್ನು ಆಧುನಿಕ ಮನಶ್ಯಾಸ್ತ್ರ ಸ್ಪಷ್ಟಪಡಿಸಿದೆ. ಪ್ರವೃತ್ತಿಗಳಿಂದ ವ್ಯಕ್ತಿಯಲ್ಲಿ ಉಂಟಾದ ಒತ್ತಡವನ್ನು ಕಮ್ಮಿಮಾಡಲು ಅರಿವು ಬಲವಾಗುತ್ತದೆ. ಇದರಿಂದಾಗ ಗೌಣವಾದ ಪ್ರವೃತ್ತಿಗಳು ಅರಿವಿನ ಫಲದಂತೆ ಕಾಣಿಸಿಕೊಳ್ಳುತ್ತದೆ. ಅರಿವು ಹೀಗೆ ಫಲಕಾರಿಯಾಗಬೇಕಾದರೆ ಪೂರ್ವಾನುಭವ ಅಥವಾ ಕಲಿತ ಕೌಶಲ ಅಗತ್ಯ. ಹೊರಗಿನ ಸನ್ನಿವೇಶವನ್ನು ಯತಾರ್ಥವಾಗಿ ಗ್ರಹಿಸಲು ಮೌಲಿಕ ವೈವಿದ್ಯವನ್ನು ಆಶ್ರಯಿಸಿ ವಿಭಿನ್ನ ಕ್ರಿಯೆಗಳನ್ನು ವ್ಯವಸ್ಥೆಗೊಳಿಸಲೂ ಅರಿವು ಅಗತ್ಯವಾಗುತ್ತದೆ.

ಸಾಮಾಜಿಕ ಮನಶ್ಯಾಸ್ತ್ರದ ಇಂದಿನ ಸ್ಥಿತಿಯಲ್ಲಿ ಸಾಮಾಜಿಕ ಸಂಬಂಧಗಳನ್ನು ಮತ್ತು ಸಾಮಾಜಿಕ ಮೌಲ್ಯಗಳನ್ನು ಅರಿಯುವ ಪ್ರಕಾರಕ್ಕೆ ಸಾಮಾಜಿಕಬೋಧೆ ಎಂದು ಹೆಸರು. ಡೇವಿಡ್ ಕ್ರೆಚ್ ಮುಂತಾದ ಸಾಮಾಜಿಕ ಮನಶ್ಯಾತ್ರಜ್ಞನರು  ಪೂರ್ವಗ್ರಹ ಜನಾಂಗಗಳಲ್ಲಿ ವೈವಿದ್ಯ, ಪಂಗಡಗಳ ವೈಷಮ್ಯ ಮುಂತಾದ ವಿವರಗಳನ್ನು ಇದೇ ದೃಷ್ಟಿಯಿಂದ  ಅಧ್ಯಯನಮಾಡಿದ್ದಾರೆ. ಈ ಪ್ರವೃತ್ತಿಗಳೆಲ್ಲವೂ ಪ್ರಸಂಗವಾದದ ನೆಲೆಯಲ್ಲಿ ಅರಿವಿನ ಪ್ರಕಾರಗಳೇ, ಇನ್ನೊಬ್ಬ ವ್ಯಕ್ತಿಯ ಸ್ವಭಾವವನ್ನು ಅರಿಯುವುದು ನಮ್ಮ ನಿತ್ಯ ಜೀವನದಲ್ಲಿ ಅತ್ಯಾವಶ್ಯಕ; ನಮ್ಮ ಅನುಭವದ ಆಧಾರದ ಮೇಲೆಯೇ ಇದನ್ನು ಸಾಧನೆಗಳ ಸಮಷ್ಟಿಜ್ಞಾನ ಸಾಮಾಜಿಕ ಬೋಧೆಯೆನಿಸಿಕೊಳ್ಳುತ್ತದೆ. ವ್ಯಕ್ತಿಯ ರೂಪ ಗ್ರಹಣ ಪ್ರತ್ಯಕ್ಷದಲ್ಲಿ ಆಗುತ್ತದೆ; ಆದರೆ ಅವನ ಮನೋಧರ್ಮ, ಪ್ರವೃತ್ತಿಗಳು, ಅವಧಾನಗಳು, ಸಹಿಷ್ಣುತೆ ಮುಂತಾದ ಆಂತರಿಕ  ವಿವರಗಳನ್ನು ಸಾಮಾಜಿಕ ಬೋಧೆಯಿಂದ ಅರಿಯದೆ ವ್ಯಕ್ತಿಯ ಸಂಪೂರ್ಣ, ಅರ್ಥಕ್ರಿಯಾಕರಿಜ್ಞಾನ ಸಾಧ್ಯವಾಗಲಾರದು. ಹಾಗೆಯೇ ಸಮಾಜವೊಂದರಲ್ಲಿ ವ್ಯವಸ್ಥಿತವಾದ ಪದ್ಧತಿಗಳು, ಸಂಪ್ರದಾಯ, ಆರ್ಥಿಕ ದಾರ್ಮಿಕ ನೀತಿ, ಸಮಾಜರಚನೆ ಮುಂತಾದವನ್ನು ಅರಿಯಲೂ ಈ ಬಗೆಯ ಬೋಧೆ ಅಗತ್ಯ. ಇದಿಲ್ಲದೆ ಸಮಾಜದಲ್ಲಿ ಪಾಲುಗೊಳ್ಳಲು ಸಾಧ್ಯವಿಲ್ಲ. ಈ ಜ್ಞಾನ ಸಂಪನ್ನವಾಗಲು ನೆರವಾಗುವ ಶಿಕ್ಷಣವನ್ನು ಮಕ್ಕಳಿಗೆ ಕೊಡಿಸಬೇಕೆಂಬ ಶ್ರದ್ಧೆ ಪ್ರಗತಿಪರರಾಷ್ಟ್ರಗಳಲ್ಲಿ ಕಾಣಬರುತ್ತಿದೆ.

ಮನಶಾಸ್ತ್ರದ ಇತಿಹಾಸದಲ್ಲಿ ಬ್ರೆಂಟಾನೊಬೇನ್, ವಾರ್ಡ್, ಜೇಮ್ಸ್ ಮುಂತಾದವರು ಅರಿವು ಮನಶ್ಯಾಸ್ತ್ರದ ಮುಖ್ಯ ಅಧ್ಯಯನವಸ್ತುವೆಂದು ಗ್ರಹಿಸಿ ಅದರ ಅನುಸಂಧಾನ ಕಡೆ ತಮ್ಮ ಲಕ್ಷ್ಯವನ್ನು ಹರಿಸಿದರು. ಜೇಮ್ಸ್ ವಾಡ್ ಅನುಭವಕ್ಕೆ ಅನಿವಾರ್ಯವಾಗಿ ವಿಷಯಿ (ಸೆಲ್ಫ್, ಈಗೊ) ಇದ್ದೇ ಇರಬೇಕೆಂದು ವಾದಿಸಿ ಅರಿವು ಮುಂತಾದ ಎಲ್ಲ ಕ್ರಿಯೆಗಳೂ ಅದರ ಪ್ರಸಾರಗಳೆಂದೇ ನಿಶ್ಚಯಿಸಿದ. ಚಂದ್ರನಿಗೂ ಅವನ ಕಲೆಗಳಿಗೂ ತಾದಾತ್ಮ್ಯ ಇರುವಂತೆ ವಿಷಯಿಗೂ ಅರಿವಿಗೂ  ತಾದಾತ್ಮ್ಯ ಸಂಬಂಧ ಇದೆ. ಹೊರಗಿನ ವಸ್ತು ದತ್ತವಾಗಿ ಪ್ರಾತಿಭಾಸಿಕವಾಗಿ ಇಂದ್ರಿಯಾನುಭವಗಳ ಮೂಲಕ ವಿಷಯಿಯನ್ನು ಮುಟ್ಟುವುದು. ಈ ಪ್ರಾತಿಬಾಸಿಕಪ್ರವೃತ್ತಿಗಳು ವ್ಯಕ್ತಿಯ ಗಮನವನ್ನು ಸೆಳೆಯುತ್ತವೆ; ಮತ್ತು ಪಾತಿಭಾಸಿಕಪ್ರವೃತ್ತಿಗಳ ಹಿಂದಿರುವ ವಸ್ತುವಿನ ವಿಚಾರವಾಗಿ ವಿಷಯಿಯ ಸಂಬಂಧವನ್ನು ರೂಪಿಸುತ್ತವೆ. ಬೇನ್ ಪ್ರಾಣಿ ಶಾಸ್ತ್ರದ ನಿಲುವನ್ನು ಹಿಡಿದು ನರಪ್ರವಾಹಗಳು ಅನುಭವದಲ್ಲಿ ಏಕತಾನವನ್ನುಂಟು ಮಾಡಬಲ್ಲುವೆಂದು ಹೇಳಿದೆ. ಅವನ ಪ್ರಕಾರ(ನರಪ್ರವಾಹವಿಲ್ಲದಿದ್ದರೆ ಮನಸ್ಸೂ ಇಲ್ಲ. ಮಿದುಳಿನರಚನೆ, ಅಲ್ಲಿ ನಡೆಯುವ ವೃತ್ತಿ(ಇವುಗಳಿಂದಲೇ ಅರಿವು ಮುಂತಾದ ಮಾನಸಿಕಕ್ರಿಯೆಗಳು ಉಂಟಾಗುವುವೆಂದು ಅವನವಾದ. ಇಂದ್ರಿಯನುಭವಗಳಲ್ಲಿ ಅರಿವಿಗೂ ನಿಕಟಸಂಬಂಧವಿದೆ. ಎಂದು ತೋರಿಸುವುದು ಈ ಎಲ್ಲ ಸಂಶೋಧಕರ ಉದ್ದೇಶವಾಗಿತ್ತು.

ಮೊದಲಿಂದ ಅರಿವಿಗೂ ಪ್ರತ್ಯಕ್ಷಾನುಭವಕ್ಕೂ ಇರುವ ವ್ಯತಾಸವನ್ನು ಗಮನಿಸಿದ್ದಾರೆ. ಬಾಹ್ಯವಸ್ತುಗಳನ್ನು ಅವಲಂಬಿಸಿ ರೂಪತಳೆದ ಇಂದ್ರಿಯನಭವಗಳು ಪ್ರತ್ಯಕ್ಷಾನುಭವಕ್ಕೆ ಅತ್ಯವಶ್ಯಕ; ಇದನ್ನು ಮೀರಿ ಪ್ರತ್ಯಕ್ಷ ಆಗಲಾರದು. ಆದರೆ ಅರಿವು ಈ ಮೇರೆಯನ್ನು ಮೀರಿ ಇಂದ್ರಿಯಾನುಭವದಲ್ಲಿ ಬಾರದ ವಿವರಗಳನ್ನು ಗ್ರಹಿಸುತ್ತದೆ. ಪ್ರತ್ಯಕ್ಷ ಒಮೊಮ್ಮೆ ತಪ್ಪಾಗಿ ಗ್ರಹಿಸಿವುದುಂಟು. ಮರಳುಗಾಡಿನಲ್ಲಿ ನಡೆಯುವಾಗ ನೀರಿನ ಭಾಸ ಆಗುವಂತೆ, ಆದರೆ ಇದರ ಪರಿಚಯ ಇದ್ದವನು, ಅನುಭವ ಇದ್ದವನು ಅದನ್ನು ನೀರೆಂದು ಗ್ರಹಿಸುವುದಿಲ್ಲ. ಇಂದ್ರಿಯಾನುಭವದ ವಿವರವನ್ನೂ ಅವನು ಅರಿವಿನಲ್ಲಿ ಮಾರ್ಪಡಿಸಿಕೊಳ್ಳುತ್ತಾನೆ. ಪ್ರತ್ಯಕ್ಷದಲ್ಲಿ ಯುಕ್ತಿ, ತರ್ಕ, ನಿರ್ಣಯ ಇವಕ್ಕೆ ಸ್ಥಾನವಿರದು; ಹೆಚ್ಚು ಕಡಿಮೆ ವಸ್ತುತಂತ್ರವದ್ದೇ ಇದು. ಆದರೆ ಅರಿವಿನಿಲ್ಲಿ ಈ ಮಾನಸಿಕಕ್ರಿಯೆಗಳು ಅªಶ್ಯವಾಗಿ ಒದಗಿಬರುತ್ತವೆ. ಪ್ರತ್ಯಕ್ಷದಲ್ಲಿ ದೃಕ್‍ಪ್ರತ್ಯಯವೇ (ಪರ್ಸೆಪ್ಟ್) ಆಧಾರವಾದರೆ, ಅರಿವಿನಲ್ಲಿ ಮಾನಸಪ್ರತ್ಯಯ (ಕಾನ್ಸೆಪಟ್) ಹೆಚ್ಚಿನ ಪಾತ್ರವನ್ನು ವಹಿಸುತ್ತದೆ. ಪ್ರಯ್ಯಕ್ಷ ತಾತ್ಕಾಲಿಕವಾದ ಅನುಭವ, ಕ್ಷಣಭಂಗುರವಾದ ಪ್ರಸಂಗ, ಅರಿವಾದರೋ ಚಿತ್ತಭಿತ್ತಿಯಲ್ಲಿ ಉಳಿದಿರಬಲ್ಲುದು. ಅಷ್ಟು ಮಾತ್ರವಲ್ಲ. ಹಲವಾರು ಮಾನಸಪ್ರತ್ಯಯಗಳು ಕಲೆತು, ವ್ಯವಸ್ಥಿತವಾಗಿ ಜ್ಞಾನವನ್ನು ಉಂಟು ಮಾಡಬಲ್ಲುವು  ಜ್ಞಾನ (ನಾಲೆಡ್ಜ್) ಎಂಬುದು ವ್ಯವಸ್ಥಿತವಾದ ಚಿತ್ತ ಪ್ರವೃತ್ತಿ, ಅರಿವು ಅನಿದಿಷ್ಟ ಗರಹಣವಾದರೆ, ಜ್ಞಾನವೆಂಬುದು ನಿರ್ದಿಷ್ಟ ಸಾಕಾರಗ್ರಹಣ. ಅದರಿಂದಲೇ ಕ್ರಿಯೆ ಹೊರಬರಲು ಸಾಧ್ಯ. ಇದನ್ನು ಭಾರತೀಯರು ವ್ಯವಹಾರಯೋಗ್ಯ ಎಂದು ವಿವರಿಸುತ್ತಾರೆ.

ಕರ್ಟ್ ಲೆವಿನ್ ಎರಡು ವಿಭಿನ್ನ ಬಾಷೆಗಳನ್ನು ಉಲ್ಲೇಖಿಸುತ್ತಾನೆ. ವಸ್ತು ತಂತ್ರವಾಗಿರುವ (ಫೆನೊಟಿಪಿಕಲ್) ಭಾಷೆ, ಮಾನಸಪ್ರತ್ಯಯಗಳನ್ನು ಅವಲಂಬಿಸಿರುವ (ಜೊನೊಟಿಪಿಕಲ್)ಭಾಷೆ, ಮೊದಲನೆಯದಕ್ಕೆ  ಆಧಾರ ದತ್ತಾಂಶಗಳು, ಇಂದ್ರಿಯ ಗ್ರಾಹ್ಯವಾದ ವಿವರಗಳು, ಇದು ಪ್ರತ್ಯಕ್ಷ. ಎರಡನೆಯದಕ್ಕೆ ಆಧಾರ ಕಲ್ಪನೆಗಳು (ಕಾನ್ಸ್‍ಟ್ರಕ್ಟ್ಸ). ಇದು ಜ್ಞಾನ, ಎರಡರಲ್ಲೂ ಅರಿವು ಇದದರೂ ಎರಡನೆಯದರಲ್ಲಿ ಅರಿವಿನ ಪಾತ್ರ ಹೆಚ್ಚು, ಅರಿವು ಕೇವಲ ವ್ಯಕ್ತಿನಿಷ್ಠೆ. ಇಂದ್ರಿಯ ದತ್ತಾಂಶಗತೆಗೆ ಅತೀತವಾದದ್ದು (ಟ್ರ್ಯಾನ್ಸೆಂಡೆಂಟಲ್). ಆದರೆ ಇದು ತತ್ತ್ವಶಾತ್ರದಲ್ಲಿ ಹೇಳುವಂತೆ ಸತ್ತಾಮಾತ್ರವಾದುದಲ್ಲ. ಬ್ರೆಂಟಾನೊಹೆಳುವಂತೆ ಕ್ರಿಯೆ. ಈ ಕ್ರಿಯೆಯಿಂದ ವಸ್ತು ಸೂಚ್ಯವಾಗುತ್ತದೆ. ಆಧರೆ ಪ್ರತ್ಯಕ್ಷದಲ್ಲಿದ್ದಂತೆ ಬಾಹ್ಯವಸ್ತುವೇ ಆಗಿರಬೇಕೆಂಬ ನಿಯಮ ಇಲ್ಲ. ಆಂತರಿಕವಸ್ತು ಅಥವಾ ಭಾವನೆಯೂ ಅರಿವಿಗೆ ವಸ್ತುವೆ. ಮೈನಾಂಗ್‍ನ ಶಿಷ್ಯ ಬೆನುಸ್ಸಿ ಅತೀಂದ್ರಿಯ ಕ್ರಿಯೆಗಳಿಂದ ಉತ್ಪನ್ನವಾದ ಸಮಷ್ಟಿ ಸ್ವರೂಪವೇ ಅರಿವು ಎಮದು ಹೆಳಿ ಬಾಹ್ಯ ವಸ್ತುಗಳು  ವಾಸ್ತವಿಕವಾದುದರಿಂದ ಉಚ್ಚ ಶ್ರೇಣಿಯದು ಎಂದೂ ಮಾನಸವಸ್ತುಗಳು ಇವುಗಳನ್ನು ಆಶ್ರಯಿಸಿ ಕಲ್ಪಿತಾವಾದುದರಿಂದ ನೀಚ ಶ್ರೇಣಿಯದು ಎಂದೂ ವಾದಿಸಿದ್ಧಾನೆ. ಈ ವಾದವನ್ನು ಸಮಷ್ಟಿವಾದಿಗಳು ನಿರಾಕರಿಸಿ ಸಮಷ್ಟಿಸ್ವರೂಪದ ಅರಿವು ಉಚ್ಚಶ್ರೇಣಿಯ ಕ್ರಿಯೆಯೇ ಎಂದು ಸಮರ್ಥಿಸುತ್ತಾರೆ. ಇಂದರಿಯಜನ್ಯಸಂವೇಧನೆಗಳು ಕೂಡ ಆಂತರಿಕ ವಿವರಗಳನ್ನು ಆಶ್ರಯಿಸಿರುತ್ತವೆ ಎಂದೂ ಕಾಫ್ಕಾ ಸ್ಪಷ್ಟಪಡಿಸಿ ಸಮಷ್ಟಿಸ್ವರೂಪಗಳು ವಾಸ್ತವವಾಗಿ ಹೊಗಿನ ಭೌತಪ್ರಪಂಚಲ್ಲಿ ಇರುವುದೆಂದೂ ಸಂವೇಧನೆಗಳಂತೆ ಅವೂ ನಿರ್ಣಯಕ್ಕೆ ಬರುವುದು ಸಾಧ್ಯ ಎಂದೂ ವಾದಿಸಿದ.

ಆಧುನಿಕ ಮನಶ್ಯಾಸ್ತ್ರದಲ್ಲಿ ಅರಿವು ಎಂಬ ಕಲ್ಪನೆ ವಿಶೇಷವಾಗಿ ಕಲಿಕೆಯ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯೋಗಗಳಲ್ಲಿ ಬರುತ್ತದೆ. ಒಂದು ಪ್ರಾಣಿಯ ಮುಂದೆ ಸಮಸ್ಯೆಯನ್ನು ಒಡ್ಡಿದಾಗ ಅದು ಸಮಸ್ಯೆಯನ್ನು ಹೆಗೆ ಪರಿಹಾರ ಮಾಡುತ್ತದೆ ಎಂಬುದನ್ನು ನಿರ್ದರಿಸಲು ಕೊಯ್ಲರ್, ಟೋಲ್ಮನ್, ಕ್ರೆಷೆವ್ಸ್ಕಿ, ಜೆನಿಂಗ್ಸ್ ಮುಂತಾದವರು ಪ್ರಯತ್ನಪಟ್ಟಿದ್ದಾರೆ. ಬಹುಮಟ್ಟಿಗೆ ಸಮ್‍ಮತವಾದ ಅಭಿಪ್ರಾಯವೆಂದರೆ ಸಮಸ್ಯೆಯ ಸನ್ನಿವೇಶವನ್ನು  ಪ್ರಾಣಿ ಅರಿಯುವಾಗಲೇ ಅದರ ಪರಿಯಾರದ ಸೂಚನೆಯೂ ಕಂಡು ಬರುತ್ತದೆ. ಎಂಬುದು. ಸಮಸ್ಯೆಯ ಸನ್ನಿವೇಶವನ್ನು ಪ್ರಾಣಿ ವಿಶಿಷ್ಟವಗಿ ಗ್ರಹಿಸುತ್ತದೆ. ಆ ಅನುಭವಗಳೊಂದಿಗೆ ಸಂದರ್ಭದ ಅಗತ್ಯದಿಂದಾದ ಅಂತಃಪ್ರವೃತ್ತಿಗಳು ದೃಶ್ಯವನ್ನು ಪರಿಷ್ಕರಿಸಿ ಅರ್ಥವತ್ತಾಗಿ ಮಾರ್ಪಡಿಸುತ್ತವೆ. ಇದಕ್ಕೆ ಅರಿವಿನ ಪುನರ್ರಚನೆ ಎಂದು ಹೆಸರು, ಇದರಲ್ಲಿ ಪ್ರತ್ಯಕ್ಷಾನುಭವವೂ ಅಗತ್ಯವೂ ಅವಧಾನವೂ ಬುದ್ಧಿಶಕ್ತಿಯೂ ಪಾತ್ರವಹಿಸಿತ್ತವೆ.

ಅರಿವು ಮನೋದೇಹಸಂಘಾತದ ಒಂದು ಪ್ರಕಾರವೆಂದು ಪರಿಗಣಿಸಿ ಅದೂ ಇತರ ದೈಹಿಕ ಮತ್ತು ಮಾನಸಿಕ ಕ್ರಿಯೆಗಳಂತೆ ಅನುಕ್ರಮವಾಗಿ ವಿಕಾಸಗೊಳ್ಳುವುದೆಂದು ಈಚೆಗೆ ನಿರ್ಧರಿಸಿದ್ದಾರೆ. ಅಲ್ಲಿ ಅರಿವು ಎಂಬ ಪ್ರತ್ಯಯದಲ್ಲಿ ಇಂದ್ರಿಯನುಭವ, ಪ್ರತ್ಯಕ್ಷಾನುಭವ, ವಿವೇಕ, ಚಿಂತನೆಗಳನ್ನು ಸೇರಿಸುತ್ತಾರೆ, ಹುಟ್ಟಿದ ಮಗುವಿನಲ್ಲಿ ಅರಿವು ಮೂಡುವುದಕ್ಕೆ ಮುನ್ನವೇ ಹತ್ತಾರು ದೈಹಿಕವ್ಯಾಪಾರಗಳು ಸಿದ್ದವಾಗಿರುತ್ತವೆ, ಸಹಜವಾಗಿ ಒದಗಿಬಂದ ನರಮಂಡಲದ ವ್ಯವಸ್ಥೆಯಿಂದ ಹೊರಗಿನ ಪ್ರೇರಕಗಳಿಗೆ ಸಮರ್ಪಕವಾದ ಪ್ರತಿಕ್ರಿಯೆಯನ್ನು ಮಾಡುವ ಸೌಲಭ್ಯ ಮಗುವಿಗೆ ಇರುತ್ತದೆ. ಮಗು ದೊಡ್ಡದಾದ ಮೇಲೂ ಉತ್ಕ್ಷೇಪಕ್ರಿಯೆ (ರಿಫ್ಲೆಕ್ಷ್‍ಆಕ್ಷನ್) ಇದ್ದೇ ಇರುತ್ದೆ. ಉತ್ಕ್ಷೇಪಕ್ರಿಯೆಗೂ ಅರಿವಿಗೂ ಸಂಬಂಧ ಏನು ಎಂಬುದು ಮನಶ್ಯಾಸ್ತ್ರದಲ್ಲಿ  ಜಿಜ್ಞಾಸೆ ಬಂದಿದೆ.  ಹಲವು ಮನಶ್ಯಾಸ್ತ್ರಜ್ಞರು ಅರಿವು ಮೂಲಭೂತವಾಗಿ, ಪ್ರಾಝಿಯ ಜೀವನದ ದೃಷ್ಟಿಯಿಂದ ಸಹಜವಾದುದಲ್ಲವೆಂದೂ ಉತ್ಕ್ಷೇಪಕ್ರಿಯೆಗಳಿಂದಲೇ ಉತ್ಪನ್ನವಾದುದೆಂದೂ ಹೇಳುತ್ತಾರೆ. ಜೀಗ್ಲರ್, ಲೋಎಚ್, ನುವೆಲ್ ಮುಂತಾದ ಪ್ರಾಣಿಶಾಸ್ತ್ರಜ್ಞರು ತಮ್ಮ ನಿರೂಪಣೆಯಲ್ಲಿ ಅರಿವನ್ನು ಪ್ರಸ್ತಾಪಿಸುವುದೇ ಇಲ್ಲ. ಅವರ ಪಾಲಿಗೆ ಅರಿವು ಉಚ್ಚಪ್ರಾಣಿಗಳಲ್ಲಿ ಎಂದರೆ ವಾನರ, ಮನುಷ್ಯ ಇವರಲ್ಲಿ ಆಗಾಗ ಕಣಿಸುವ ವ್ಯಾಪಾರವಿಶೇಷ. ಇದೂ ಮಿದುಳು, ನರಮಂಡಲಗಳ ಒಂದು ವ್ಯವಸ್ಥೆಯ ಅಭಿವ್ಯಕ್ತಿ ಅಷ್ಟೆ. ಆದರೆ ಈ ವಾದಕ್ಕಿಂತ ಹೆಚ್ಚು ಪ್ರಚಲಿತವಾದ ವಾದವೆಂದರೆ ಮಗು ಹುಟ್ಟಿದಾಗಲೇ ಅರಿವು ಮೂಡುವುದೆಂದೂ ಅರಿವಿನಿಂದಲೇ ಎಲ್ಲ ಕ್ರಿಯೆಗಳೂ (ದೈಹಿಕ, ಮಾನಸಿಕ) ವ್ಯವಸ್ಥಿತವಾಗುವುದೆಂದೂ ಹೇಳುವುದೆ, ಪ್ರಾಣಿಗಳ ಸಂತತಿಯಲ್ಲಿ ಮೊದಲ ಸ್ಥತಿಗಳಲ್ಲಿ ಉಕ್ಷೇಪಕ್ರಿಯೆಗಳಾಗುತ್ತವೆ ಎಂದು ನಿಲುವನ್ನು ತಳೆದಿದ್ದಾರೆ. ಪ್ರಯತ್ನದ ಮಿತವ್ಯಯ ಎಂಬ ನಿಯಮದ ಪ್ರಕಾರ ಪ್ರತಿಯೊಂದು ಕ್ರಿಯೆಯೂ ಮತ್ತೆ ಮತ್ತೆ ಪುನರಾವರ್ತಿತವಾದಾಗ ಅರಿವಿನ ಒತ್ತಾಸೆ ಕಮ್ಮಿಯಾಗುತ್ತ  ಬಂದು ಕಡೆಗೆ ಆ ಕ್ರಿಯೆ ಸ್ವಚ್ಛಂದವಾಗಿಬಿಡುತ್ತದೆ. (ಸ್ಪಾನ್ಟೇನಿಯಸ್). ಇದು ಅರಿವು ಉತ್ಕ್ಷೇಪಕ್ರಿಯೆ ಆಗುವ ಬಗೆ, ಯಾವುದಾದರೂ ಕಾರಣದಿಂದ ಆ ಕ್ರಿಯೆಗೆ ಅಡಚಣೆ ಬಂದಾಗ ಮಾತ್ರ ಅರಿವು ಒಡನೆಯೇ ಉಂಟಾಗುತ್ತದೆ. ಕೋಣೆಯಲ್ಲಿ ದಿನಂ ಪ್ರತಿ ಕಾಣುವ ವಸ್ತುಗಳು ನಮ್ಮ ಅರಿವಿಗೆ ಮೀರಿ ಇರುತ್ತವೆ; ಆದರೆ ಆ ವಸ್ತುಗಳಲ್ಲಿ ಒಂದು ಕಾಣದಾದಾಗ ಅಥವಾ ಹೊಸದೊಂದು ವಸ್ತು ಸೇರಿದಾಗ, ಅಥವಾ ಇದ್ದ ಭಂಗಿ ಬದಲಾದಾಗ ತಟ್ಟನೆ ಅರಿವು ಮೂಡುತ್ತದೆ; ಪ್ರತ್ಯಕ್ಷದ ಪ್ರಕಾರಗಳಲ್ಲಿ ಇದೂ ಒಂದು. ಹೀಗೆ ಒಂದೇ ಪ್ರೇರಕನೆಲೆಗೆ  ಸಮನ್ವಯ ಮಾಡಿಕೊಂಡಾಗ ಅರಿವು ಜಾರುವುದನ್ನು  ಇಂದ್ರಿಯನುಭವದ ಮಟ್ಟಕ್ಕೆ ಹೊಂದಿಸುವುದು ಎಂದು ವ್ಯವಹರಿಸುತ್ತಾರೆ. ಇಲ್ಲಿ ಅರಿವು ಇಲ್ಲವೆಂದಲ್ಲ; ಅರಿವಿನೊಂದಿಗೆ ಇರಬೇಕಾದ ಅವಧಾನ ಇಲ್ಲವೆಂದು.

 ಪ್ರಾಣಿಯ ಬಾಳುವೆಲ್ಲಿ ಅರಿವು ಬೆಳೆಯುವ ನೆಲೆ ಎನ್ನುವ ಕಲ್ಪನೆ ಇದೆ. ಇದಕ್ಕೆ ಸಂಬಂಧಿಸಿದಂತೆ ನರಮಂಡಲದ ವ್ಯವಸ್ಥ ಹೆಚ್ಚು ಹೆಚ್ಚಾಗ ಕ್ರಿಯಶೀಲವಾಗಿ ಸಮರ್ಥವಾಗುವುದು. ದೈಹಿಕ ವ್ಯವಸ್ಥೇ ಅಚ್ಚುಕಟ್ಟಾಗುವುದು. ಮಾನಸಿಕ ಪ್ರವೃತ್ತಿಗಳು ಅಭಿವ್ಯಕ್ತವಾಗುವುವು. ಅರಿವಿನ ಪ್ರಕಾರಗಳನ್ನು ದೈಹಿಕ ಉತ್ಕ್ಷೇಪಕ್ರಿಯೆಗಳನ್ನು ಅನಭಿವ್ಯಕ್ತ ಅರಿವು ಎಂದು ವ್ಯಹರಿಸುತ್ತರೆ. ಜೆ.ಎ.ಗಿಲ್ಬರ್ಟ್ ಎಂಬ ಮನಶ್ಯಾಸ್ತ್ರಜ್ಞ ಯೇಲ್ ವಿಶ್ವವಿದ್ಯಾನಿಲಯದ ಪ್ರಯೋಗಶಾಲೆಯಲ್ಲಿ ಮಕ್ಕಳ ಇಂದ್ರಿಯಾನುಭವಗಳಿಗೆ ಸಂಬಂಧಪಟ್ಟಂತೆ ಸ್ವಾರಸ್ಯವಾದ ಸಂಶೋಧನೆಗಳನ್ನು  ನಡೆಸಿ ಮೊದ ಮೊದಲು  ಇಂದ್ರಿಯನುಭವಗಳಿಗೆ ವಿಮುಖವಾದ ಮಗು ಬರುಬರುತ್ತ ವಿವೇಕವನ್ನು ಬೆಳೆಸಿಕೊಂಡು ಬರುವ ಬಗೆಯನ್ನು ಈ ಪ್ರಯೋಗಗಳ  ಆಧಾರದ ಮೇಲೆ ನಿರೂಪಿಸಿದ್ದಾನೆ. ವಿವೇಕದ ಆವಿಷ್ಕರಣ ಅರಿವಿನ ಪ್ರಭಾವದಿಂದ ಎಂದು ಅವನ ವಾದ, ಪ್ರತ್ಯಕ್ಷಾನುಭವದಲ್ಲೂ ಆರಂಭದಿಶೆಯಲ್ಲಿ ಐಂದ್ರಿಯ ಉತ್ಕ್ಷೇಪಗಳ ಪಾತ್ರವೇ ಹೆಚ್ಚಾಗಿದ್ದು ಅಭ್ಯಾಸಬಲದಿಂದ, ವಿವೇಚನಾಶಕ್ತಿ ಬರುಬರುತ್ತಾ ಮೂಡುವುದೆಂದು ಪ್ರಯರ್ ಲಾಯ್‍ಡ್ ಮೋರ್ಗನ್, ಮೆಗ್‍ಡೂಗಲ್, ಮುಂತಾದ ಪ್ರಯೋಗಶೀಲ ಮನಶ್ಯಾಸ್ತ್ರಜ್ಞರು ಸ್ಪಷ್ಟಪಡಿಸಿದ್ದಾರೆ. ಇಂದ್ರಿಯಾನುಭವಗಳಲ್ಲಿ ಮೂಲಭೂತವಾದ ವರಣಪ್ರವೃತ್ತಿ (ಸೆಲೆಕ್ಟಿವಿಟಿ) ಇದ್ದೇ ಇರುವುದೆಂದು ಹಲವಾರು ಸಂಶೋದನೆಗಳು ತೋರಿವೆ. ಇದರ ಆಧಾರದ ಮೇಲೆ ಸಂಕಲ್ಪವೂ ಅವಧಾನವೂ ಕಾಣಿಸಿಕೊಳ್ಳುವುವು. ಈ ಕ್ರಿಯೆಗಳಿಗೆ ಅರಿವಿನ ಒತ್ತಡ ಎನ್ನುತ್ತಾರೆ. ಸಮಸ್ಥಾನದ (ಹೋಮೋಸ್ಟ್ಯಾಟಿಸ್) ಪ್ರತಿಪಾದಕರು ಅರಿವನ್ನು ಈ ದೃಷ್ಟಿಯಿಂದಲೇ ವಿಮರ್ಶೆ ಮಾಡಿದ್ದಾರೆ. ಅರಿವು ಅವಧಾನದೊಂದಿಗೆ ಸೇರಿದಾಗ ಜ್ಞಾನಕ್ಕೆ ನೆರವಾಗುತ್ತದೆ. 				
(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ